Saturday, August 2, 2014

ಭಾವಾನುವಾದ - 0028

ನಿನ್ನಗಲಿಕೆಯ ನಂತರ,
ಅದೆಲ್ಲಿಂದ ತರಲಿ ನೋವುಗಳನ್ನು ನನ್ನೀ ಮನಕೆ.
ನನಗಂತೂ ಬಿಡುವಿರುವುದಿಲ್ಲ ಗೆಳತಿ,
ಕಾರಣ :
ಎಚ್ಚರವಿದ್ದರೆ, ನಿನ್ನ ನೆನಪು ನನ್ನ ಮನವನ್ನಾಳುತ್ತಿರುತ್ತೆ,
ಮಲಗಿದರೆ, ನೀನೇ ನನ್ನ ಕನಸ್ಸನ್ನಾಳುತ್ತಿರುತ್ತಿ.

ಭಾವಾನುವಾದ - 0027

ಗೆಳತಿ, ನಿನ್ನ ಪ್ರಿತಿಗಾಗಿಯೇ, ನನ್ನ
ಹೃದಯವು ಗುಲಾಮನಂತೆ ಇದೆ.
ಇಲ್ಲದಿದ್ದರೆ, ಇದು ಮೊದಲಿನಿಂದಲೂ
ರಾಜನಂತೆ ಮೆರೆಯುತಿತ್ತು
.

ಭಾವಾನುವಾದ - 0026

ಅವಳೆಷ್ಟು ಉಪಕಾರಿ, ಪ್ರೀತಿಗಾಗಿ
ಸಾವಿರಾರು ನೋವುಗಳನ್ನು ನನಗಾಗಿ 
ಕೊಟ್ಟು ಹೋದಳು.
ನಾನೋ, ತುಂಬಾ ಸ್ವಾರ್ಥಿಯಾಗಿದ್ದೆ.
ಪ್ರೀತಿಯ ಹೊರತಾಗಿ ಬೇರೇನನ್ನೂ
ನೀಡಲಿಲ್ಲ...

ಭಾವಾನುವಾದ - 0025

ದೂಷಿಸುತ್ತಿದ್ದಾಳೆ,
ನಾನು ತುಂಬಾ ಬದಲಾಗಿದ್ದೇನೆ ಎಂದು,
ಅವಳ ಮಾತೂ ನಿಜವೇ,
ಗಿಡದಿಂದ ಅಗಲಿದ ಎಲೆಯ ಬಣ್ಣ
ಬದಲಾಗುವುದು ಸಹಜ ತಾನೆ..

ಭಾವಾನುವಾದ - 0024

ನನಗೇನೂ ತೋಚುತ್ತಿಲ್ಲ,
ನಂಬಿದರೇ, ಯಾರನ್ನು ನಂಬಬೇಕು ಎಂದು,
ಮಣ್ಞಿನ ಗೊಂಬೆಗಳಂತಿರುವ ಇವರು,
ಯಾವುದೇ ಕ್ಷಣದಲ್ಲಿ ಬೇಕಾದರೂ  ಮಾರಾಟವಾಗಿ ಬಿಡುವರು.

Friday, July 11, 2014

ಭಾವಾನುವಾದ - 0023

ಗೆಳತಿ, ಬಾಣವು ನಾಟಿದಾಗ ಅಷ್ಟೊಂದು ನೋವಾಗಲಿಲ್ಲ,
ಆದರೆ ಬಿಲ್ಲು ನಿನ್ನ ಕೈಯಲ್ಲೇ ಇರುವುದು ನೋಡಿದಾಗ, ಗಾಯದ ನೋವು ತಡೆಯಲಾಗಲಿಲ್ಲ...

ಭಾವಾನುವಾದ - 0022

ನನ್ನೆದುರಲ್ಲೇ ಕುಳಿತ್ತಿದ್ದಳು ಆದ್ರೆ ನನ್ನವಳಾಗಿ ಅಲ್ಲ...
ನಮ್ಮಿಬ್ಬರ ನಡುವಿನ 'ಅಂತರ' ಹೀಗೂ ಇರಬಹುದೆಂದು ಯೋಚಿಸಿಯೂ ಇರಲಿಲ್ಲ...